ರೈತರಿಂದ ಉಚಿತ ಸ್ಪಿಂಕ್ಲರ್ ಸೌಲಭ್ಯಕ್ಕೆ (Free Sprinkler Scheme) ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲಾತಿಗಳ ಸಹಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ಪ್ರಸಕ್ತ 2025-26ನೇ ಸಾಲಿನ ಸೂಕ್ಷ್ಮ ನೀರಾವರಿ ಯೋಜನೆಯಡಿ, ಕೃಷಿ ಇಲಾಖೆ ವತಿಯಿಂದ ತುಂತುರು ನೀರಾವರಿ ಘಟಕಗಳನ್ನು (ಸ್ಪಿಂಕ್ಲರ್ ವ್ಯವಸ್ಥೆ) ಅಳವಡಿಸಿಕೊಳ್ಳಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಜಲಸಂಗ್ರಹ ಹಾಗೂ ನೀರಿನ ಪರಿಣಾಮಕಾರಿ ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸಿದ್ದು; ಪರಿಶಿಷ್ಟ ಜಾತಿ (SC) ಹಾಗೂ ಪರಿಶಿಷ್ಟ ಪಂಗಡದ (ST) ರೈತರು ಅರ್ಜಿ ಸಲ್ಲಿಸಲು ಅವಕಾಶವಿದೆ.
ಇದನ್ನೂ ಓದಿ: Haveri Hingaru Bele Vime – ಹಾವೇರಿ ಜಿಲ್ಲೆಯ ರೈತರಿಂದ ಹಿಂಗಾರು ಬೆಳೆವಿಮೆ ನೋಂದಣಿಗೆ ಅರ್ಜಿ ಆಹ್ವಾನ
ಹೆಚ್ಚುವರಿ ಜಮೀನಿಗೂ ಸೌಲಭ್ಯ
ಈಗಾಗಲೇ ಸ್ಪಿಂಕ್ಲರ್ ಸೌಲಭ್ಯ ಪಡೆದಿರುವ ಪರಿಶಿಷ್ಟ ಜಾತಿ ರೈತರಿಗೆ ಮತ್ತೊಂದು ಸುವಾರ್ತೆ. ಈಗ ಅವರು ತಮ್ಮ ಹೆಚ್ಚುವರಿ ವಿಸ್ತೀರ್ಣದ ಜಮೀನಿಗೆ ಅಂದರೆ 2 ಎಕರೆ 20 ಗುಂಟೆಯಿಂದ 5 ಎಕರೆ ವರೆಗೆ ಮತ್ತೊಮ್ಮೆ ಸ್ಪಿಂಕ್ಲರ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಇದರಿಂದ ರೈತರು ಇನ್ನಷ್ಟು ಜಮೀನಿನಲ್ಲಿ ನೀರಿನ ಸರಿಯಾದ ಬಳಕೆಯಿಂದ ಉತ್ತಮ ಉತ್ಪಾದನೆ ಪಡೆಯಲು ಸಾಧ್ಯವಾಗಲಿದೆ. ನೀರಾವರಿ ಮೂಲಕ ಆದಾಯ ದ್ವಿಗುಣಗೊಳ್ಳಲು ಸಹಕಾರಿ ಆಗಲಿದೆ.

ಅರ್ಜಿ ಸಲ್ಲಿಕೆಗೆ ಅಗತ್ಯ ದಾಖಲೆಗಳು
ಅರ್ಜಿಯನ್ನು ಸಲ್ಲಿಸಲು ಆಸಕ್ತ ರೈತರು ಕೆಳಗಿನ ದಾಖಲಾತಿಗಳನ್ನು ಕಡ್ಡಾಯವಾಗಿ ಹೊಂದಿರಬೇಕು:
- ಆಧಾರ್ ಕಾರ್ಡ್
- ಅ ಖಾತೆ ಉತಾರ
- ಆರ್.ಟಿ.ಸಿ (RTC) ಉತಾರ
- ಬೆಳೆ ಬೆಳೆಸುತ್ತಿರುವ ಬಗ್ಗೆ ಹಾಗೂ ನೀರಾವರಿ ಮೂಲದ ದೃಢೀಕರಣ ಪತ್ರ
- ಬ್ಯಾಂಕ್ ಪಾಸ್‌ಬುಕ್ ನಕಲು
- 3 ಪಾಸ್‌ಪೋರ್ಟ್ ಗಾತ್ರದ ಫೋಟೋಗಳು
ಇವುಗಳೊಂದಿಗೆ ರೈತರು ತಮ್ಮ ಸಂಬಂಧಿಸಿದ ರೈತ ಸಂಪರ್ಕ ಕೇಂದ್ರಕ್ಕೆ (Raitha Samparka Kendra) ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ: Honge Krushi- ಹಾವೇರಿ ರೈತರಿಗೆ ವರದಾನವಾಗುವ ಹೊಂಗೆ ಕೃಷಿ | ರಾಣೇಬೆನ್ನೂರು ಹನುಮನಮಟ್ಟಿ ಜೈವಿಕ ಇಂಧನ ಕೇಂದ್ರದ ಮಾಹಿತಿ
ಜಾತಿ ಪ್ರಮಾಣಪತ್ರ ಕಡ್ಡಾಯ
ಸ್ಪಿಂಕ್ಲರ್ ಘಟಕಕ್ಕಾಗಿ ಅರ್ಜಿ ಸಲ್ಲಿಸುವ SC/ST ರೈತರು ಚಾಲ್ತಿ ಸಾಲಿನ ಅಥವಾ ನವೀಕರಿಸಿದ RD ಸಂಖ್ಯೆ ಹೊಂದಿದ ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಸರಿಯಾದ ದಾಖಲೆಗಳಿರುವುದು ಅರ್ಜಿ ಪ್ರಕ್ರಿಯೆಯಲ್ಲಿ ಯಾವುದೇ ತೊಂದರೆ ಇಲ್ಲದೆ ಅನುಮೋದನೆಗೆ ಸಹಾಯಕವಾಗುತ್ತದೆ.
ಅರ್ಜಿಯನ್ನು ಸಲ್ಲಿಸಲು ಯಾವುದೇ ಅಂತಿಮ ದಿನಾಂಕವನ್ನು ಪ್ರಕಟಿಸುವ ಮೊದಲು ರೈತರು ತಮ್ಮ ದಾಖಲಾತಿಗಳನ್ನು ಪೂರ್ಣಗೊಳಿಸಿ ತಕ್ಷಣವೇ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸುವಂತೆ ಹಾವೇರಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ ಬಿ.ಎಚ್. ಅವರು ಮಾಹಿತಿ ನೀಡಿದ್ದಾರೆ.
ಸೂಕ್ಷ್ಮ ನೀರಾವರಿ ವ್ಯವಸ್ಥೆ ರೈತರಿಗೆ ನೀರಿನ ಉಳಿತಾಯದ ಜೊತೆಗೆ ಬೆಳೆ ಉತ್ಪಾದನೆಯನ್ನು ಹೆಚ್ಚಿಸಲು ನೆರವಾಗುವ ಪರಿಣಾಮಕಾರಿ ಸಾಧನವಾಗಿದೆ. ಸರ್ಕಾರ ನೀಡುತ್ತಿರುವ ಈ ಉಚಿತ ಸ್ಪಿಂಕ್ಲರ್ ಸೌಲಭ್ಯವನ್ನು ಅರ್ಹ ರೈತ ಸಮುದಾಯ ಸದ್ಭಳಕೆ ಮಾಡಿಕೊಳ್ಳಬಹುದಾಗಿದೆ.

ಹಾವೇರಿ ಜಿಲ್ಲೆಯ ಸುದ್ದಿ, ಸರ್ಕಾರಿ ಯೋಜನೆಗಳು, ಅರ್ಜಿ ಪ್ರಕ್ರಿಯೆಗಳು, ರೈತರ ಉಪಯುಕ್ತ ಮಾಹಿತಿ ಮತ್ತು ಸ್ಥಳೀಯ ಅಪ್ಡೇಟ್ಗಳನ್ನು ನಿಖರ ಹಾಗೂ ಸರಳವಾಗಿ ಹಂಚುವ ಜಾಲತಾಣ