Haveri District Cooperative Sector Info- ಸಹಕಾರಿ ಕ್ಷೇತ್ರಕ್ಕೆ ಹಾವೇರಿ ಜಿಲ್ಲೆಯ ಕೊಡುಗೆ | ಸಹಕಾರಿ ಕ್ಷೇತ್ರದ ಸಂಪೂರ್ಣ ಮಾಹಿತಿ

Spread the love

ಹಾವೇರಿಯಲ್ಲಿ ರಾಜ್ಯಮಟ್ಟದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಭರ್ಜರಿಯಾಗಿ ನೆರವೇರಿದೆ. ಈ ಹಿನ್ನಲೆಯಲ್ಲಿ ಸಹಕಾರ ಕ್ಷೇತ್ರಕ್ಕೆ ಹಾವೇರಿ ಜಿಲ್ಲೆಯಿಂದ (Haveri District Cooperative Sector Info) ಸಿಕ್ಕ ಕೊಡುಗೆ ಏನು? ಎಂಬ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ರಾಜ್ಯದ ವಿವಿಧ ಸಹಕಾರ ಮಹಾ ಮಂಡಳಗಳ ನೇತೃತ್ವದಲ್ಲಿ ಹಾವೇರಿ ಜಿಲ್ಲೆಯ ವಿವಿಧ ಸಹಕಾರಿ ಸಂಘಗಳ ಸಹಯೋಗದಲ್ಲಿ ರಾಜ್ಯಮಟ್ಟದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ-2025ವನ್ನು ಹಾವೇರಿ ನಗರದ ರಜನಿ ಸಭಾಂಗಣದಲ್ಲಿ ನವೆಂಬರ್ 18ರಂದು ವಿಜೃಂಭಣೆಯಿಂದ ನಡೆದಿದೆ.

ಬೆಳಗಾವಿ ವಿಭಾಗದ ರಾಜ್ಯ ಮಟ್ಟದ ಕಾರ್ಯಕ್ರಮವನ್ನು ಹಾವೇರಿಯಲ್ಲಿ ಆಯೋಜಿಸಿದ್ದು, ಬರೋಬ್ಬರಿ ಮೂರು ಸಾವಿರಕ್ಕೂ ಅಧಿಕ ಸಹಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ದೇಶಾದ್ಯಂತ ಪ್ರತಿ ವರ್ಷ ನವೆಂಬರ್ 14 ರಿಂದ 20ರ ವರೆಗೆ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಆಚರಿಸಲಾಗುತ್ತಿದ್ದು, ಈ ಬಾರಿ ‘ಆತ್ಮನಿರ್ಭರ ಭಾರತ ಸಾಧನೆಗೆ ವಾಹಕಗಳಾಗಿ ಸಹಕಾರ ಸಂಸ್ಥೆಗಳು’ ಎಂಬ ಧ್ಯೇಯ ವಾಕ್ಯದೊಂದಿಗೆ, ‘ಸಹಕಾರ ಉದ್ಯಮಶೀಲತೆಯಿಂದ ಯುವಜನತೆ, ಮಹಿಳಾ ಮತ್ತು ಅಬಲ ವರ್ಗದ ಸಬಲೀಕರಣ’ ಎಂಬ ವಿಷಯವನ್ನಿಟ್ಟುಕೊಂಡು ಸಪ್ತಾಹ ಆಚರಿಸಲಾಗಿದೆ.

ಇದನ್ನೂ ಓದಿ: Honge Krushi- ಹಾವೇರಿ ರೈತರಿಗೆ ವರದಾನವಾಗುವ ಹೊಂಗೆ ಕೃಷಿ | ರಾಣೇಬೆನ್ನೂರು ಹನುಮನಮಟ್ಟಿ ಜೈವಿಕ ಇಂಧನ ಕೇಂದ್ರದ ಮಾಹಿತಿ

ಸಹಕಾರ ಕ್ಷೇತ್ರದ ಪಿತಾಮಹ ಸಿದ್ದನಗೌಡ ಪಾಟೀಲರು

ಭಾರತದಲ್ಲಿ ಮೊಟ್ಟಮೊದಲ ಬಾರಿ ಸಹಕಾರ ಸಂಘವನ್ನು ಸ್ಥಾಪಿಸಿದ ಕೀರ್ತಿ ಕರ್ನಾಟಕದ ಗದಗ ಜಿಲ್ಲೆಯ ಕಣಗಿನಹಾಳ ಗ್ರಾಮದ ಸಿದ್ದನಗೌಡ ಸಣ್ಣರಾಮನಗೌಡ ಪಾಟೀಲ ಅವರಿಗೆ ಸಲ್ಲುತ್ತದೆ. 1905ರಲ್ಲಿ ಕಣಗಿನಹಾಳ ಸಹಕಾರ ಸಂಘ ಸ್ಥಾಪಿಸುವ ಮೂಲಕ ಕೇವಲ ಭಾರತ ದೇಶ ಮಾತ್ರವಲ್ಲದೇ ಇಡೀ ಏಷ್ಯಾದಲ್ಲೇ ಪ್ರಪ್ರಥಮ ಸಹಕಾರ ಸಂಘ ಎಂಬ ಹೆಗ್ಗಳಿಕೆಯೂ ಇವರಿಗಿದೆ.

ಗ್ರಾಮೀಣ ಭಾಗದಲ್ಲಿ ಸಹಕಾರ ಸಂಘಗಳನ್ನು ಸ್ಥಾಪಿಸುವ ಮೂಲಕ ಬಡ ಜನರಿಗೆ ಆರ್ಥಿಕ ನೆರವು ನೀಡುವ ಉದ್ದೇಶ ಹೊಂದಿದವರು ಸಿದ್ದನಗೌಡರು. ಇವರ ಈ ದೃಷ್ಟಿಕೋನದಿಂದ ಅವರನ್ನು ಸಹಕಾರ ಕ್ಷೇತ್ರದ ಪಿತಾಮಹ ಎಂದು ಕರೆಯಲಾಗುತ್ತದೆ. 1904ರ ಸಹಕಾರ ಸಂಘಗಳ ಕಾಯಿದೆ ಭಾರತದಲ್ಲಿ ಸಹಕಾರಿ ಚಳವಳಿ ಕಾನೂನು ಬದ್ಧವಾಗಿ ಆರಂಭಗೊAಡಿತು. ಅದನ್ನು ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತಂದು ಜನಪ್ರಿಯಗೊಳಿಸಿದವರಲ್ಲಿ ಇವರು ಪ್ರಮುಖರಾಗಿದ್ದರು.

ಭಾರತದಲ್ಲಿ ಸಹಕಾರ ಸಂಘಗಳ ಚಳವಳಿ ಮುಖ್ಯವಾಗಿ ರೈತರು ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವನ್ನು ಸಾಲದ ಶೋಷಣೆಯಿಂದ ರಕ್ಷಣೆ, ಆರ್ಥಿಕ ಪ್ರಗತಿ ಮತ್ತು ಸಮಾನತೆ ತರಲು ಪ್ರಾರಂಭವಾಯಿತು. ಇದು ವಿವಿಧ ಹಂತಗಳಲ್ಲಿ ಬೃಹದಾಕಾರವಾಗಿ ಚಾಚಿ ಇಂದು ಎಲ್ಲೆಡೆ ಹೆಮ್ಮರವಾಗಿ ಬೆಳೆದು ನಿಂತಿದೆ.

ಸಹಕಾರಿ ಕ್ಷೇತ್ರಕ್ಕೆ ಹಾವೇರಿ ಜಿಲ್ಲೆಯ ಕೊಡುಗೆ

ಸಹಕಾರಿ ಕ್ಷೇತ್ರಕ್ಕೆ ಹಾವೇರಿ ಜಿಲ್ಲೆ ವಿಶಿಷ್ಟ ಕೊಡುಗೆ ನೀಡಿದೆ. ಸಹಕಾರ ಸಂಘಗಳ ಕಾಯ್ದೆಯಡಿ ಜಿಲ್ಲೆಯಲ್ಲಿ ಒಟ್ಟಾರೆ 1,423 ಸಹಕಾರ ಸಂಘಗಳಿದ್ದು, 9,14,316 ಜನರು ಸದಸ್ಯತ್ವ ಹೊಂದಿದ್ದಾರೆ. ಸಂಘಗಳ ನೋಂದಣಿ ಕಾಯ್ದೆಯಡಿಯಲ್ಲಿ ಒಟ್ಟು 22,412 ಸಂಘ/ಸAಸ್ಥೆ (ಎನ್‌ಜಿಒ) ನೋಂದಾಯಿಸಲ್ಪಟ್ಟಿವೆ.

ಹಾವೇರಿ ಜಿಲ್ಲೆಯಲ್ಲಿ ಒಂದು ಸಹಕಾರಿ ಸಕ್ಕರೆ ಕಾರ್ಖಾನೆ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿ ಒಟ್ಟು 483 ಹಾಲು ಉತ್ಪಾದಕರ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿ ಹಾಲು ಉತ್ಪಾದಕರ ಸಹಕಾರಒಕ್ಕೂಟ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿ 3 ನೂಲಿನ ಗಿರಣಿಗಳು ಕಾರ್ಯನಿರ್ವಹಿಸುತ್ತಿವೆ.

2023-24 ಸಾಲಿನಲ್ಲಿ 3,94,04,808 ಹಾಲು ಸರಬರಾಜು ಮಾಡಿದ್ದು, ಈ ಪೈಕಿ ರೈತರಿಗೆ ಸರ್ಕಾರದಿಂದ 19.49 ಕೋಟಿ ಪ್ರೋತ್ಸಾಹ ಧನ ವಿತರಣೆ ಮಾಡಲಾಗಿದೆ. 2024-25 ಸಾಲಿನಲ್ಲಿ 4.76.71.141 ಲೀಟರ್ ಹಾಲು ಸರಬರಾಜು ಮಾಡಿದ್ದು, ಈ ಪೈಕಿ ರೈತರಿಗೆ ಸರ್ಕಾರದಿಂದ 16.50 ಕೋಟಿ ಪ್ರೋತ್ಸಾಹ ಧನ ವಿತರಣೆ ಮಾಡಲಾಗಿದೆ.

ರೈತರಿಗೆ ಬಡ್ಡಿ ಇಲ್ಲದ ಸಾಲ ವಿತರಣೆ

ಜಿಲ್ಲೆಯಲ್ಲಿ 21 ಕೆಸಿಸಿ ಬ್ಯಾಂಕ್ ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ 2024-25ನೇ ಸಾಲಿನಲ್ಲಿ 32,995 ಸದ್ಯರಿಗೆ 228 ಅಲ್ಪಾವಧಿ ಸಾಲ ವಿತರಿಸಲಾಗಿದೆ. ಪ್ರಸಕ್ತ 2025-26 ನೇ ಸಾಲಿನಲ್ಲಿ 17,747 ಸದಸ್ಯರಿಗೆ 135.00 ಕೋಟಿ ಅಲ್ಪಾವಧಿ ಸಾಲ ವಿತರಿಸಲಾಗಿದೆ. 314 ಸದಸ್ಯರಿಗೆ 19 ಕೋಟಿ ಮಧ್ಯಮಾವಧಿ ಕೃಷಿ ಸಾಲ ವಿತರಿಸಲಾಗಿದೆ.

ಜಿಲ್ಲೆಯಲ್ಲಿ ಕೆಸ್ಕಾರ್ಡ್ ಬ್ಯಾಂಕಿನ ಜಿಲ್ಲಾ ಶಾಖೆಗಳಿದ್ದು, 8 ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತವೆ. 2024-25ನೇ ಸಾಲಿನಲ್ಲಿ ಒಟ್ಟು 716 ರೈತರಿಗೆ 11.00 ಕೋಟಿ ದೀರ್ಘಾವಧಿ ಸಾಲ ವಿತರಿಸಲಾಗಿದೆ.

ಜಿಲ್ಲೆಯಲ್ಲಿ 9 ಪಟ್ಟಣ ಸಹಕಾರಿ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿದೆ. ಇವುಗಳಲ್ಲಿ 16,459 ಸದಸ್ಯತ್ವವನ್ನು ಹೊಂದಿರುತ್ತಾರೆ. ಒಟ್ಟಾರೆ ದುಡಿಯುವ ಬಂಡವಾಳ 269.54 ಕೋಟಿ ಇದೆ. 9 ಅರ್ಬನ್ ಬ್ಯಾಂಕುಗಳು ಲಾಭದಲ್ಲಿದ್ದು, ವಾರ್ಷಿಕ 6.5 ಕೋಟಿ ಲಾಭದಲ್ಲಿ ಕಾರ್ಯನಿರ್ವಹಿಸುತ್ತದೆ.

ಯಶಸ್ವಿನಿ ಯೋಜನೆ ವಿವರ

ಪ್ರಸ್ತುತ 2025-26ನೇ ಸಾಲಿನಲ್ಲಿ ಸರ್ಕಾರದ ಮಹತ್ವ್ತಕಾಂಕ್ಷಿ ಯೋಜನೆಯಾದ ಯಶಸ್ವಿನಿ ಯೋಜನೆಯಡಿಯಲ್ಲಿ ಹಾವೇರಿ ಜಿಲ್ಲೆಯಿಂದ ಒಟ್ಟು 1,04,373 ಜನ ಸದಸ್ಯರಾಗಿ ನೋಂದಾಯಿಸಿದ್ದು, ಅದರಲ್ಲಿ ಪರಿಶಿಷ್ಟ ಜಾತಿ 9,070 ಪರಿಶಿಷ್ಟ ಪಂಗಡ 12,450 ಜನ ಸದಸ್ಯರಾಗಿ ನೋದಾಯಿಸಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು ಯಶಸ್ವಿನಿ ಯೋಜನೆಯಡಿ ನೋಂದಾಯಿಸಿದ ಸದಸ್ಯರುಗಳಿಗೆ 23,332 ಪಿ.ವಿ.ಸಿ ಕಾರ್ಡ್ಗಳನ್ನು ವಿತರಿಸಲಾಗಿದೆ. ಜಿಲ್ಲೆಯಲ್ಲಿ ಯಶಸ್ವಿನಿ ಯೋಜನೆಯಡಿ ಒಟ್ಟು 22 ನೋಂದಾಯಿತ ನೆಟ್‌ವರ್ಕ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ.

ಜಿಲ್ಲೆಯಲ್ಲಿ 1,919 ಫಲಾನುಭವಿಗಳು ಈ ಯೋಜನೆಯಡಿ ಪ್ರಯೋಜನೆ ಪಡೆದುಕೊಂಡಿದ್ದು ಅವರ ಚಿಕಿತ್ಸಾ ವೆಚ್ಚ 2.60 ಕೋಟಿ ಮೊತ್ತವನ್ನು ಸರ್ಕಾರ ಭರಿಸಿದೆ.

2025-26 ಪಂಗಡ, ಹಿಂದುಳಿದ ವರ್ಗ ಮಹಿಳೆಯರು, ವಿಕಲಚೇತರು ಹಾಗೂ ಬಡತನ ರೇಖೆಗಿಂತ ಕೆಳಗಿರುವ ಜನರನ್ನು ವಿವಿಧ ಸಹಕಾರ ಸಂಘಗಳಲ್ಲಿ ಸದಸ್ಯರನ್ನಾಗಿ ನೋಂದಾಯಿಸುವ ಯೋಜನೆಯಡಿ ಒಟ್ಟಾರೆ 590 ಜನರನ್ನು ಸದಸ್ಯರನ್ನಾಗಿ ನೋಂದಾಯಿಸಲು 3.7 ಲಕ್ಷ ಗುರಿ ನಿಗದಿ ಪಡಿಸಿದ್ದು ಅದರಂತೆ ಪ್ರಸ್ತಾವನೆಗಳನ್ನು ಕೇಂದ್ರ ಕಚೇರಿಗೆ ಸಲ್ಲಿಸಿದೆ.

ಜಿಲ್ಲಾ ಪಂಚಾಯತಿ ಯೋಜನೆಯಡಿಯಲ್ಲಿ 2024-25ನೇ ಸಾಲಿನಲ್ಲಿ ಸಹಕಾರ ಸಂಘಗಳಿಗೆ ಶೇರು ಬಂಡವಾಳ ಹಾಗೂ ಕೌಂಟರ್ ನಿರ್ಮಾಣಕ್ಕಾಗಿ 47 ಸಹಕಾರ ಸಂಘಗಳಿಗೆ ಒಟ್ಟು 21.32 ಲಕ್ಷ ರೂ. ನಿಗದಿಪಡಿಸಲಾಗಿದೆ.


Spread the love
WhatsApp Group Join Now
Telegram Group Join Now

1 thought on “Haveri District Cooperative Sector Info- ಸಹಕಾರಿ ಕ್ಷೇತ್ರಕ್ಕೆ ಹಾವೇರಿ ಜಿಲ್ಲೆಯ ಕೊಡುಗೆ | ಸಹಕಾರಿ ಕ್ಷೇತ್ರದ ಸಂಪೂರ್ಣ ಮಾಹಿತಿ”

Leave a Comment