ಉಚಿತ ಹೊಲಿಗೆ ಯಂತ್ರ (Free Sewing Machine) ಸೇರಿದಂತೆ ವಿವಿಧ ಉಪಕರಣ ವಿತರಣೆ ಮಾಡಲು ಹಾವೇರಿ ಜಿಲ್ಲಾ ಪಂಚಾಯತಿ ಗ್ರಾಮೀಣ ಕೈಗಾರಿಕೆ ವಿಭಾಗದಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…
ಹಾವೇರಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ವಾಸಿಸುವ ಕುಶಲಕರ್ಮಿ ಮಹಿಳೆಯರಿಗೆ ಸಂತಸದ ಸುದ್ದಿ. 2025-26ನೇ ಸಾಲಿನ ಜಿಲ್ಲಾ ವಲಯ ಯೋಜನೆಯಡಿ, ‘ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಸಲಕರಣೆ ಸರಬರಾಜು ಯೋಜನೆ’ಯ ಮೂಲಕ ಉಚಿತ ಹೊಲಿಗೆ ಯಂತ್ರ ಸೇರಿ ವಿವಿಧ ಉಪಕರಣಗಳ ವಿತರಣೆಗೆ ಜಿಲ್ಲಾಡಳಿತ ಅರ್ಜಿ ಆಹ್ವಾನಿಸಿದೆ.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಎಲ್ಲಾ ಕುಶಲಕರ್ಮಿ ಮಹಿಳೆಯರು ನಿಗದಿತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಚೇರಿಯನ್ನು 08375-249065 ಎಂಬ ದೂರವಾಣಿ ಸಂಖ್ಯೆಯಲ್ಲಿ ಸಂಪರ್ಕಿಸಲು ಸೂಚಿಸಲಾಗಿದೆ.
ಇದನ್ನೂ ಓದಿ: Haveri Minister Candidate List- ಹಾವೇರಿ ಜಿಲ್ಲೆಯ ಶಾಸಕರಲ್ಲಿ ಯಾರಿಗೆ ಒಲಿಯಲಿದೆ ಮಂತ್ರಿ ಭಾಗ್ಯ?
ಯಾವ ಉಪಕರಣಗಳನ್ನು ವಿತರಿಸಲಾಗುತ್ತದೆ?
ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಸಲಕರಣೆ ಸರಬರಾಜು ಯೋಜನೆಯಡಿ ಅರ್ಜಿದಾರರ ವೃತ್ತಿಯ ಅವಶ್ಯಕತೆಗೆ ಅನುಗುಣವಾಗಿ ಕೆಳಗಿನ ಸಾಧನಗಳನ್ನು ಉಚಿತವಾಗಿ ನೀಡಲಾಗುತ್ತದೆ:
- ಹೊಲಿಗೆ ಯಂತ್ರ (ಮಹಿಳೆಯರಿಗೆ ಮಾತ್ರ)
- ಬಡಗಿತನ (ಕಾರ್ಪೆಂಟರಿ) ಉಪಕರಣ
- ಗೌಂಡಿ (ಮೇಸ್ತ್ರಿ) ಕೆಲಸದ ಉಪಕರಣ

ಅರ್ಜಿ ಸಲ್ಲಿಕೆಗೆ ಅಗತ್ಯ ದಾಖಲೆಗಳು
ಅರ್ಜಿಯೊಂದಿಗೆ ಕೆಳಗಿನ ದಾಖಲೆಗಳನ್ನು ಸ್ಪಷ್ಟವಾಗಿ ಸ್ಕ್ಯಾನ್ ಮಾಡಿ ಪಿಡಿಎಫ್ ಮಾದರಿಯಲ್ಲಿ ಅಪ್‌ಲೋಡ್ ಮಾಡಬೇಕಾಗುತ್ತದೆ.
- ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಫೋಟೋ
- ತಹಶೀಲ್ದಾರರಿಂದ ಪಡೆಯುವ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ
- ವಿದ್ಯಾರ್ಹತೆ ದಾಖಲೆ
- ಗ್ರಾಮ ಪಂಚಾಯತಿಯಿಂದ ನೀಡುವ ವೃತ್ತಿ ದೃಢೀಕರಣ ಪತ್ರ (ಪಿಡಿಒ ಸಹಿ ಮತ್ತು ಮುದ್ರೆ ಅವಶ್ಯಕ)
- ವಿಕಲಚೇತನರ ಪ್ರಮಾಣ ಪತ್ರ (ಅನ್ವಯಿಸಿದಲ್ಲಿ)
- ಹೊಲಿಗೆ ತರಬೇತಿ ಪ್ರಮಾಣ ಪತ್ರ (ಹೊಲಿಗೆ ಯಂತ್ರಕ್ಕಾಗಿ ಮಾತ್ರ)
- ಪಡಿತರ ಚೀಟಿ / ಮತದಾರರ ಚೀಟಿ / ಆಧಾರ್ ಕಾರ್ಡ್
- ಜನ್ಮ ದಿನಾಂಕ ದೃಢೀಕರಣ ದಾಖಲಾತಿ (ವರ್ಗಾವಣೆ ಪ್ರಮಾಣ ಪತ್ರ / SSLC ಅಂಕಪಟ್ಟಿ / ಇತರೆ ದಾಖಲೆ)
ದಾಖಲೆಗಳನ್ನು ಸ್ಪಷ್ಟವಾಗಿ ಅಪ್‌ಲೋಡ್ ಮಾಡದಿದ್ದರೆ ಅಥವಾ ಮಾಹಿತಿ ಅಪೂರ್ಣವಾಗಿದ್ದರೆ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ.
ಅರ್ಜಿ ಸಲ್ಲಿಕೆಗೆ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 18 ರಿಂದ 42 ವರ್ಷ ಹಾಗೂ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 18 ರಿಂದ 45 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
ಇದನ್ನೂ ಓದಿ: Free Sprinkler Scheme- ಉಚಿತ ಸ್ಪಿಂಕ್ಲರ್ ಸೌಲಭ್ಯಕ್ಕೆ ರೈತರಿಂದ ಅರ್ಜಿ ಆಹ್ವಾನ
ಷರತ್ತುಗಳು
- ಹೊಲಿಗೆ ಯಂತ್ರ ಉಪಕರಣಕ್ಕೆ ಕೇವಲ ಮಹಿಳೆಯರು ಮಾತ್ರ ಅರ್ಹರು.
- ಹಿಂದಿನ 5 ವರ್ಷಗಳಲ್ಲಿ ಇದೇ ಇಲಾಖೆಯಿಂದ ಯಾವುದೇ ಉಪಕರಣ ಪಡೆದಿರಬಾರದು.
- ಒಂದು ಕುಟುಂಬದಿಂದ ಒಂದು ಅರ್ಜಿ ಮಾತ್ರ ಸಲ್ಲಿಸಬಹುದು.
- ಸರ್ಕಾರಿ ನೌಕರರು ಹಾಗೂ ಅವರ ಅವಲಂಬಿತರಿಗೆ ಈ ಯೋಜನೆ ಅನ್ವಯಿಸುವುದಿಲ್ಲ.
ಸಾಮಾನ್ಯ ಸೂಚನೆಗಳು
- ಎಲ್ಲಾ ದಾಖಲೆಗಳನ್ನು ಸ್ಪಷ್ಟವಾಗಿಯೂ ಸಂಪೂರ್ಣವಾಗಿಯೂ ಅಪ್‌ಲೋಡ್ ಮಾಡುವುದು ಕಡ್ಡಾಯ.
- ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಿಂದ ನೀಡುವ ವೃತ್ತಿ ದೃಢೀಕರಣ ಪತ್ರ ಇಲ್ಲದೆ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ.
- ತಪ್ಪು ಮಾಹಿತಿ ನೀಡಿದರೆ ಅರ್ಜಿ ತಿರಸ್ಕಾರಕ್ಕೆ ಒಳಪಡುವ ಸಾಧ್ಯತೆ ಹೆಚ್ಚು.
ಇದನ್ನೂ ಓದಿ: Haveri Hingaru Bele Vime – ಹಾವೇರಿ ಜಿಲ್ಲೆಯ ರೈತರಿಂದ ಹಿಂಗಾರು ಬೆಳೆವಿಮೆ ನೋಂದಣಿಗೆ ಅರ್ಜಿ ಆಹ್ವಾನ
ಆಯ್ಕೆ ಪ್ರಕ್ರಿಯೆ ಹೇಗೆ?
ಯೋಜನೆಗೆ ಲಭ್ಯವಿರುವ ಸ್ಥಾನಗಳಿಗೆ ಹೋಲಿಸಿದರೆ ಹೆಚ್ಚಿನ ಅರ್ಜಿಗಳು ಬಂದರೆ, ನ್ಯಾಯಸಮ್ಮತ ರೀತಿಯಲ್ಲಿ ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತದೆ. ಈ ಪ್ರಕ್ರಿಯೆಯನ್ನು ಜಿಲ್ಲಾ ಪಂಚಾಯಿತಿ ಆಯ್ಕೆ ಸಮಿತಿ ನಡೆಸಲಿದೆ ಎಂದು ಹಾವೇರಿ ಜಿಲ್ಲಾ ಪಂಚಾಯತಿ ಗ್ರಾಮೀಣ ಕೈಗಾರಿಕೆ ವಿಭಾಗದ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಅರ್ಜಿ ಲಿಂಕ್: Apply Now
- ಅಧಿಕೃತ ವೆಬ್‌ಸೈಟ್: haveri.nic.in

ಹಾವೇರಿ ಜಿಲ್ಲೆಯ ಸುದ್ದಿ, ಸರ್ಕಾರಿ ಯೋಜನೆಗಳು, ಅರ್ಜಿ ಪ್ರಕ್ರಿಯೆಗಳು, ರೈತರ ಉಪಯುಕ್ತ ಮಾಹಿತಿ ಮತ್ತು ಸ್ಥಳೀಯ ಅಪ್ಡೇಟ್ಗಳನ್ನು ನಿಖರ ಹಾಗೂ ಸರಳವಾಗಿ ಹಂಚುವ ಜಾಲತಾಣ
1 thought on “Free Sewing Machine- ಹಾವೇರಿ ಜಿಲ್ಲೆ: ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆಗೆ ಅರ್ಜಿ ಆಹ್ವಾನ”